ಡ್ಯಾನ್ಸ್‌ಡ್ಯಾನ್ಸ್ ಷೋ ನಲ್ಲಿಶಿಲ್ಪಾ ಶೆಟ್ಟಿ
Posted date: 12 Fri, Feb 2016 – 10:35:31 PM

ಬೆಲ್ಲಿಡ್ಯಾನ್ಸ್‌ಮಾಡಿದ ಮಂಗಳೂರ ಬೆಡಗಿ ಸುವರ್ಣ ವಾಹಿನಿಯಡ್ಯಾನ್ಸ್‌ಡ್ಯಾನ್ಸ್ ಷೋ ನ ಪ್ರತಿವಾರಡಿಫರೆಂಟಾಗಿ ಮೂಡಿ ಬರುತ್ತಿದೆ.ಕ್ರೇಜಿಸ್ಟಾರ್‌ರವಿಚಂದ್ರನ್ ಮೊದಲ ಅತಿಥಿಯಾಗಿ ಬಂದದ್ದು ವೇದಿಕೆಯ ಮೇಲೆ ಕ್ರೇಜಿ ಲೋಕವನ್ನೇ ನೀರ್ಮಾಣ ಮಾಡಿದ ಹಾಗೆ ಇತ್ತು.ಇನ್ನೂಹಿಂದಿನ ಸಂಚಿಕೆಯಲ್ಲಿಖುಷ್ಬುಎಂಟ್ರಿಎಲ್ಲರಮನದಲ್ಲಿತಲ್ಲಣಉಂಟು ಮಾಡಿತ್ತು. ಈ ವಾರದ ಸಂಚಿಕೆಯಲ್ಲಿಕನ್ನಡದವರೇಆದ ಬಾಲಿವುಡ್‌ನಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ವಿಶೇಷ ಅತಿಥಿ.
ಫಿಲ್ಮ್ ಫೇರ್ ನಿಂದಅತ್ಯುತ್ತಮ ನಟಿ ಪ್ರಶಸ್ತಿ ಪಡೆದಶಿಲ್ಪಾ ಶೆಟ್ಟಿಯವರನ್ನುರಾಣಿಯರ ಹಾಗೆ ಪಲ್ಲಕ್ಕಿಯ ಮೂಕಾಂತರವೇದಿಕೆಗೆಕರೆತಂದಿರುವ ಕ್ಷಣಗಳು ಬಲು ರಂಜನೀಯವಾಗಿದೆ.. ಹಾಗೆ ೧೦ ಸ್ಪರ್ಧಿಗಳು ಅವರ ಮೆಲೆ ಪುಷ್ಪ ವೃಷ್ಠಿಯನ್ನುಗೈದಿರುವರು.ಪಲ್ಲಿಕ್ಕಿಯಿಂದ ಇಳಿದ ಶಿಲ್ಪಾ ನಿರೂಪಕಅಕುಲ್‌ಜೊತೆ ಸ್ಟೆಪ್‌ಹಾಕಿದ್ದಾರೆ.ಡ್ಯಾನ್ಸ್‌ಡ್ಯಾನ್ಸ್ ಸ್ಪರ್ಧಿಗಳಿಗೆ ಈ ಮೊದಲುಒಂದುಟಾಸ್ಕ್‌ನ್ನು ನೀಡಲಾಗಿತ್ತು ಸ್ವತ: ದುಡಿದುಅದರಿಂದ ಬರುವ ಹಣದಿಂದ ಶಿಲ್ಪಾ ಶೆಟ್ಟಿಅವರಿಗೆಉಡುಗರೆಯನ್ನು ನೀಡಬೇಕೆಂದಿತ್ತು,ಅದರೆ ತುಣುಕುಗಳನ್ನು ನೋಡಿ ಶಿಲ್ಪಾ ಎಲ್ಲ ಸ್ಪರ್ಧಿಗಳಿಗೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ.
ಸ್ಪರ್ಧಿಅಭಿಶೇಕ್ ಮುತ್ತೈದಿ ಬಾಗಿಣವಾಗಿಸೀರೆ ಹಣ್ಣುತಾಂಬೂಲವನ್ನುಉಡುಗರೆಯಾಗಿ ನೀಡಿದ್ದಾರೆ.ಅವರುಉಡುಗರೆಯಾಗಿಕೊಟ್ಟ ಸೀರೆಗೆ ಸಂತಸವ್ಯಕ್ತ ಪಡಿಸಿದ್ದಾರೆ.ವಿಶೇಷವೆಂದರೆಡ್ಯಾನ್ಸ್‌ಡ್ಯಾನ್ಸ್ ಸ್ಪರ್ಧಿ ಶಿಲ್ಪಾ ಮತ್ತು ಶಿಲ್ಪಾ ಶೆಟ್ಟಿಯವರ ಫ್ರೋಫೈಲ್‌ಒಂದೆತರನಾಗಿದೆ.ಇವರಿಬ್ಬರು ಶ್ರೇಷ್ಠ ಸುಂದರಿಅವಾರ್ಡತೆಗೆದುಕೊಂಡಿದ್ದಾರೆ.ಹಾಗೆ ಇಬ್ಬರು ವಾಲಿಬಾಲ್‌ಆಟಗಾರರು ಹಾಗಾಗಿ ಇವರಿಬ್ಬರ ನಡುವೆ ವೇದಿಕೆಯ ಮೇಲೆ ವಾಲಿಬಾಲ್‌ಸ್ಪರ್ಧೆ ನಡೆಯುತ್ತದೆ
ಇದೇ ಸಂದರ್ಭದಲ್ಲಿ ಶ್ರವಂತ್ ಮತ್ತು ಶ್ರಾವ್ಯಾ ಸಂಪಾದಿಸಿದ ಹಣವನ್ನು ಶಿಲ್ಪಾ ಶೆಟ್ಟಿಯವರ ಮುಖಾಂತರಎನ್.ಜಿ.ಓ.ಗೆ ನೀಡಲಾಗುತ್ತದೆ.ಇದರಿಂದ ಸಂತೋಷಗೊಂಡಅವರುಇವರಿಬ್ಬರಿಗೂ ಶುಭ ಹಾರೈಸುತ್ತಾರೆ.
ಮಂಗಳೂರು ಮಲ್ಲಿಗೆ ಮತ್ತುಶಿಲ್ಪಾ ಮತ್ತುಅವರಮಗನ ಭಾವಚಿತ್ರವನ್ನುಉಡುಗರೆಯಾಗಿ ಪಡೆದ ಶಿಲ್ಪಾ ಆಯ್ ಲವ್ ಡ್ಯಾನ್ಸ್‌ಡ್ಯಾನ್ಸ್ ಎಂದುಷೋ ಗೆ ಅಭಿನಂದನೆಯನ್ನು ಸಲ್ಲಿಸಿರುವರು.
 ದಿಲ್ ನೇ ಏ ಕಹಾ ಹೈ ದಿಲ್ ಸೆ ಗೆ ಶಿಲ್ಪಾ ಶಟ್ಟಿಯವರ ಸ್ಟೆಫ್ಸ್ ಮತ್ತೆಧಡಕನ್‌ಚಿತ್ರವನ್ನು ನೆನಪಿಗೆ ತಂದುಕೊಡುತ್ತದೆ.
ಈ ಷೋನಲ್ಲಿಜಿಲೇಬಿ ಮತ್ತು ಪಾನಿಪೂರಿಯನ್ನು ವೇದಿಕೆಗೆ ತಂದಾಗ ಶಿಲ್ಪಾ ಆ ತಿನಿಸುಗಳ ಇಷ್ಟದ ಬಗೆಗೆ ಹೇಳಿ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.ಭೌತಿಷ್‌ಗೆ ಸೂಪರ್‌ಗಿಂತ ಮೇಲೆ ಎಂಬ ಬಿರುದನ್ನು ನೀಡಿ ಪ್ಲೇನ್‌ಕಿಸ್‌ಕೊಡಲು ಹೋದಾಗಆತ ನಾಚಿಕೊಂಡಿರುವ ಸಂದರ್ಭ ಈ ಸಂಚಿಕೆಯಲ್ಲಿದೆ.ಶಿಲ್ಪಾ ಶೆಟ್ಟಿ ಮತ್ತು ಲಾಸ್ಯಾ ಈ ಷೋನಲ್ಲಿ ಬೆಲ್ಲಿಡ್ಯಾನ್ಸ್ ಮಾಡಿಎಲ್ಲರನ್ನು ರಂಜಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed